/newsfirstlive-kannada/media/post_attachments/wp-content/uploads/2024/04/RCB-2.jpg)
ಇಂದು ಕ್ರಿಕೆಟ್ ಫ್ಯಾನ್ಸ್ ಮುಂಬೈ ವಾಂಖೆಡೆ ಮೈದಾನವನ್ನು ಎದುರು ನೋಡುತ್ತಿದ್ದಾರೆ. ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಜಟಾಪಟಿಗೆ ಈ ಮೈದಾನ ಸಾಕ್ಷಿಯಾಗಲಿದೆ. ಹಾಗಾಗಿ ಇತ್ತಂಡಗಳ ಫ್ಯಾನ್ಸ್ ನಡುವೆ ಕುತೂಹಲ ಜಾಸ್ತಿಯಾಗಿದೆ.
ಇಂಥಾ ಕುತೂಹಲ ಸಂಗತಿ ನಡುವೆ ಇಂದಿನ ಪಂದ್ಯದಲ್ಲಿ ಆರ್ಸಿಬಿ ತಂಡದಲ್ಲಿ ನಾಯಕನ ಬದಲಾವಣೆ ಮಾಡಲಾಗಿದೆ ಎಂಬ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮತ್ತೊಂದೆಡೆ ನಾಯಕ ಫಾಫ್ಗೆ ಇಂಜುರಿಯಾದ ಕಾರಣ ಅವರ ಸ್ಥಾನವನ್ನು ಕೊಹ್ಲಿ ನಿರ್ವಹಿಸುತ್ತಾರೆ ಎಂಬ ಸಂಗತಿಯೂ ಹರಿದಾಡುತ್ತಿದೆ. ಅದಕ್ಕೆ ತಕ್ಕಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳು ವೈರಲ್ ಆಗುತ್ತಿವೆ.
ಆದರೆ ಮಾಹಿತಿ ಪ್ರಕಾರ ಇದೊಂದು ಗಾಳಿ ಸುದ್ದಿ ಎಂದು ಹೇಳಲಾಗುತ್ತಿದೆ. ಫಾಫ್ ಇಂದು ಆರ್ಸಿಬಿ ತಂಡವನ್ನು ಎಂದಿನಂತೆ ಮುನ್ನಡೆಸುತ್ತಿದ್ದಾರೆ. ಮತ್ತೊಂದೆಡೆ ಮುಂಬೈ ಮೈದಾನದಲ್ಲಿ ಗೆಲುವು ಸಾಧಿಸಲು ಪಣ ತೊಟ್ಟಿದ್ದಾರೆ.
ಇತ್ತಂಡಗಳ ಸಾಮರ್ಥ್ಯ ಮತ್ತು ಸಾಧನೆಯನ್ನು ಗಮನಿಸುವುದಾದರೆ ಮುಂಬೈ ತಂಡ ನಾಲ್ಕು ಪಂದ್ಯವನ್ನು ಆಡಿದೆ. ಅದರಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಇತ್ತ ಆರ್ಸಿಬಿ ಐದು ಪಂದ್ಯವನ್ನು ಆಡಿದೆ. ಅದರಲ್ಲಿ ಒಂದು ಪಂದ್ಯವನ್ನು ಗೆದ್ದಿದೆ. ಹೀಗಾಗಿ ಇಂದಿನ ಪಂದ್ಯದ ಮೇಲೆ ಎಲ್ಲರ ಗಮನವಿದೆ.
Say hello to captain Kohli , Yet again .#PlayBold#IPL2024pic.twitter.com/IB3CGVYONJ
— Royal Challengers Bengaluru ? (@RCB_Post)
Say hello to captain Kohli , Yet again .#PlayBold#IPL2024pic.twitter.com/IB3CGVYONJ
— ꜰ ʟ ᴀ ʀ ᴇ ` (@FlareOnEyes) April 10, 2024
">April 10, 2024
ಇದನ್ನೂ ಓದಿ:ಒಂದಲ್ಲಾ, ಎರಡಲ್ಲಾ, 150 ಬಾರಿ ತಿರಸ್ಕಾರ.. Dream 11 ಕಟ್ಟಿ ಬೆಳೆಸಿದ ಹರ್ಷ್ ಜೈನ್ ಸಾಹಸಗಾಥೆ ಬಗ್ಗೆ ಓದಲೇಬೇಕು
ಮುಂಬೈ ಇಂಡಿಯನ್ಸ್ ಸಂಭಾವ್ಯ ಆಟಗಾರರು: ರೋಹಿತ್ ಶರ್ಮಾ, ಇಶಾನ್ ಕಿಶನ್ (WK), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (c), ಟಿಮ್ ಡೇವಿಡ್, ಮೊಹಮ್ಮದ್ ನಬಿ, ರೊಮಾರಿಯೋ ಶೆಫರ್ಡ್, ಪಿಯೂಷ್ ಚಾವ್ಲಾ, ಜೆರಾಲ್ಡ್ ಕೋಟ್ಜಿ, ಜಸ್ಪ್ರೀತ್ ಬುಮ್ರಾ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಆಟಗಾರರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ಸಿ), ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್ವೆಲ್, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಮಯಾಂಕ್ ದಾಗರ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ